Skip to content
ejobupdate

KMF Milk Payment App- ನಿಮ್ಮ ಹಾಲಿನ ಲೆಕ್ಕ ಎಷ್ಟು? ಒಂದೇ ಕ್ಲಿಕ್ಕಿನಲ್ಲಿ ತಿಳಿಯಿರಿ

Advertisement

ಹೈನುಗಾರಿಕೆಯನ್ನು ಮಾಡುವ ರೈತರಿಗೆ ಪ್ರತಿ ನಿತ್ಯ ಹಾಲಿನ ಡೈರಿಗಳಿಗೆ ಹಾಕುವ ಹಾಲಿನ ಪ್ರಮಾಣದ ಸಂಪೂರ್ಣ(KMF Milk Payment) ಇತಿಹಾಸ ಮತ್ತು ಪ್ರತಿ ತಿಂಗಳು ಪಾವತಿ ಮಾಡಿದ ಹಣದ ವಿವರವನ್ನು ಮನೆಯಲ್ಲೇ ಇದ್ದು ಮೊಬೈಲ್ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಲು ಅವಕಾಶವಿದ್ದು ಇಂದಿನ ಲೇಖನದಲ್ಲಿ ಇದರ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಅನೇಕ ರೈತರಿಗೆ ಈ ಮೊಬೈಲ್ ಅಪ್ಲಿಕೇಶನ್(KMF Milk Payment Details) ಕುರಿತು ಮಾಹಿತಿ ಇರುವುದಿಲ್ಲ ರೈತರು ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ AMCS Farmers App ಅನ್ನು ಡೌನ್ಲೋಡ್ ಮಾಡಿಕೊಂಡು ಡೈರಿಗೆ ಸರಬರಾಜು ಮಾಡುವ ಹಾಲಿನ ಸಂಪೂರ್ಣ ಇತಿಹಾಸವನ್ನು ತಿಳಿದುಕೊಳ್ಳಬಹುದಾಗಿದೆ, ಈ ಮಾಹಿತಿಯನ್ನು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಇನ್ನಿತರೆ ರೈತರಿಗೂ ಸಹ ಮಾಹಿತಿಯನ್ನು ತಲುಪಿಸಲು ಸಹಕರಿಸಲು ಕೋರಿದೆ.

ಏನಿದು AMCS Farmers App ಮೊಬೈಲ ಅಪ್ಲಿಕೇಶನ್? ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಈ ಮೊಬೈಲ್ ಅಪ್ಲಿಕೇಶನ್ ನಲ್ಲಿ ರೈತರು ಯಾವೆಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು? ಹಾಗೂ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡುವ ವಿಧಾನ ಹೇಗೆ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Milk Payment App-ಏನಿದು AMCS Farmers App ಮೊಬೈಲ ಅಪ್ಲಿಕೇಶನ್?

ಕೇಂದ್ರ ಸರಕಾರದಡಿ ಕಾರ್ಯನಿರ್ವಹಿಸುವ ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್(National Dairy Development Board) ವತಿಯಿಂದ AMCS Farmers App ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ದಿಪಡಿಸಲಾಗಿದ್ದು ರೈತರು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸ್ಥಳೀಯ KMF ಹಾಲಿನ ಡೈರಿಗಳಿಗೆ ಪ್ರತಿ ನಿತ್ಯ ಹಾಕಲು ಹಾಲಿನ ಸಂಪೂರ್ಣ ವಿವರವನ್ನು ಪಡೆಯಬಹುದು.

Milk Payment-ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಪ್ರಸ್ತುತ KMF ಡೈರಿಗಳಿಗೆ ರೈತರು ಪ್ರತಿ ನಿತ್ಯ ಹಾಕುವ ಹಾಲಿನ ವಿವರವನ್ನು ಡಿಜಿಟಲ್ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ ಈ ತಂತ್ರಾಂಶದ ಮಾಹಿತಿಯನ್ನು ಕೃಡೀಕರಿಸಿ AMCS Farmers App ಮೊಬೈಲ್ ಅಪ್ಲಿಕೇಶನ್ ಗೆ ಲಿಂಕ್ ಮಾಡಲಾಗಿದ್ದು ಈ ಮಾಹಿತಿಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ಒಂದೆರಡು ಕ್ಲಿಕ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

Milk Payment Details Mobile Application-ಮೊಬೈಲ್ ಅಪ್ಲಿಕೇಶನ್ ನಲ್ಲಿ ರೈತರು ಯಾವೆಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು?

ರೈತರು ಗೂಗಲ್ ಪ್ಲೈ ಸ್ಟೋರ್ ಮೂಲಕ AMCS Farmers App ಅನ್ನು ಡೌನ್ಲೋಡ್ ಮಾಡಿಕೊಂಡು ಈ ಕೆಳಗಿನ ಪಟ್ಟಿಯಲ್ಲಿರುವ ಮಾಹಿತಿಯನ್ನು ಪಡೆಯಬಹುದು.

  • ಪ್ರತಿ ನಿತ್ಯ ಡೈರಿಗೆ ಹಾಕುವ ಹಾಲಿನ ಪ್ರಮಾಣ/Fat/ಹಾಲಿನ ದರ/SNF ವಿವರ.
  • ಪ್ರತಿ 15 ದಿನದ ಹಾಲಿನ ಪಾವತಿ ಮೊತ್ತದ ವಿವರ.
  • ತಿಂಗಳುವಾರು ಹಾಲಿನ ಮೊತ್ತ.
  • ವಾರ್ಷಿಕ ಹಾಲಿನ ಪಾವತಿ ಮೊತ್ತದ ವಿವರವನ್ನು ಇಲ್ಲಿ ನೀವ ಪಡೆಯಬಹುದು.

KMF Milk Payment App-ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡುವ ವಿಧಾನ ಹೇಗೆ?

ರೈತರು ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ AMCS Farmers App ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಲ್ಲೇ ಹಾಲಿನ ಲೆಕ್ಕವನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಪ್ರಥಮ ಹಂತದಲ್ಲಿ “Milk Payment Details Mobile Application” ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಅಧಿಕೃತ AMCS Farmers App ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಇದಾದ ಬಳಿಕ ಇಲ್ಲಿ ಡೈರಿಯಲ್ಲಿ ನೋಂದಣಿ ಮಾಡಿಕೊಂಡಿರುವ 10 ಅಂಕಿಯ ಮೊಬೈಲ್ ನಂಬರ್ ಅನ್ನು ನಮೂದಿಸಿ ನಿಮ್ಮ ಕಾರ್ಡ ನಂಬರ್ ಅನ್ನು ಹಾಕಿ OTP ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ ಲಾಗಿನ್ ಅಗಬೇಕು.

ವಿಶೇಷ ಸೂಚನೆ:

ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಅಗುವ ಸಮಯದಲ್ಲಿ ನಿಮ್ಮ ಕಾರ್ಡ ನಂಬರ್ ಅನ್ನು ನಮೂದಿಸುವಾಗ ನಿಮ್ಮ ಕಾರ್ಡ ಸಂಖ್ಯೆ- 1 ಅಗಿದ್ದರೆ 0001 ಎಂದು ನಮೂದಿಸಿ.
ನಿಮ್ಮ ಕಾರ್ಡ ಸಂಖ್ಯೆ- 11 ಅಗಿದ್ದರೆ 0011 ಎಂದು ನಮೂದಿಸಿ.
ನಿಮ್ಮ ಕಾರ್ಡ ಸಂಖ್ಯೆ- 111 ಅಗಿದ್ದರೆ 0111 ಎಂದು ನಮೂದಿಸಿ.

Step-3: ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಅದ ಬಳಿಕ ಬಲ ಬದಿಯಲ್ಲಿ ಕಾಣುವ “Menu” ಬಟನ್ ಮೇಲೆ ಕ್ಲಿಕ್ ಮಾಡಿ Daily Passbook ಮೇಲೆ ಕ್ಲಿಕ್ ಮಾಡಿ ದಿನಾಂಕವನ್ನು ಆಯ್ಕೆ ಮಾಡಿಕೊಂಡು ಪ್ರತಿ ನಿತ್ಯ ಡೈರಿಗೆ ಹಾಕಿರುವ ಹಾಲಿನ ವಿವರವನ್ನು ನೋಡಬಹುದು. ಇದೇ ರೀತಿ Monthly Passbook/Payment Cycle Wise Billiing ಬಟನ್ ಮೇಲೆ ಕ್ಲಿಕ್ ಮಾಡಿ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದು.

Declaration

ejobupdate.in is not affiliated with any government agency, official department, or authority. The details on this website/post are given for informational purposes. The use of our content will not be subject to the responsibility for any errors and damages. The interested candidates are always advised to check out information firsthand on the official site or notification before taking any action.